ಗುಣಮಟ್ಟ ಮತ್ತು ಅಹಾರ ಸುರಕ್ಷತೆಯ ನೀತಿ ಸಂಹಿತೆ
ನೀತಿ ಹೇಳಿಕೆ:
ಆಹಾರದ ಗುಣಮಟ್ಟ, ಶುಧ್ದತೆ, ಹೊಸ ಆವಿಷ್ಕಾರ ಮತ್ತು ಸ್ಥಿರವಾದ ಉತ್ಪನ್ನದ ಗುಣಮಟ್ಟ, MDPLನ ಗುಣಮಟ್ಟ ಮತ್ತು ಆಹಾರ ಸುರಕ್ಷತೆಯ ನೀತಿ, 'SHICQ' ಮಾನದಂಡಗಳು ನಮ್ಮನ್ನು, ನಮ್ಮ ಗ್ರಾಹಕರನ್ನು ನಿರಂತರವಾಗಿ ಸಂತುಷ್ಟಿಗೊಳಿಸಲು ಮತ್ತು ತೃಪ್ತಿಗೊಳಿಸಲು ಸಾಧ್ಯವಾಗುವಂತೆ ಮಾಡುತ್ತವೆ.
ಈ ಎಲ್ಲಾ ನಿಯಂತ್ರಣ ಮತ್ತು ವ್ಯವಸ್ಥೆಗಳು ನಮ್ಮ ಉತ್ಪನ್ನಗಳನ್ನು ಸುಸಜ್ಜಿತವಾಗಿ ಸಂಗ್ರಹಿಸಲು ಮತ್ತು ಸಪ್ಲೈ ಚೈನ್ ಪ್ರಕ್ರಿಯೆಯಲ್ಲಿ ಎಲ್ಲಾ ವಿಧವಾದ ಶಾಸನಬದ್ಧ ಮತ್ತು ಸರ್ಕಾರದ ನಿಯಂತ್ರಣಗಳನ್ನು ಪೂರೈಸಲು ಸಹಕಾರಿಯಾಗಿವೆ.
ಪರಿಸರದ ನೀತಿ ಸಂಹಿತೆ
ನೀತಿ ಸಂಹಿತೆಯ ಹೇಳಿಕೆ:
ನಮ್ಮ ಪರಿಸರದ ಮೇಲೆ ನಾವು ಬೀರುವ ಪ್ರಭಾವವನ್ನು ಕಡಿಮೆಗೊಳಿಸಲು MDPL ಈ ಕೆಳಗಿನ ರೀತಿಯಲ್ಲಿ ಶ್ರಮಿಸುತ್ತದೆ:
- ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕರ ಉದ್ಯೋಗ ವಾತಾವರಣವನ್ನು ಒದಗಿಸುವುದು
- ಪರಿಸರವನ್ನು ಉಳಿಸುವ ಸಂಪ್ರದಾಯವನ್ನು ಅಳವಡಿಸಿಕೊಂಡು, ಜವಾಬ್ದಾರಿಗಳನ್ನು ನಿಯೋಜಿಸಿ ಅದನ್ನು ಅರ್ಥ ಮಾಡಿಕೊಳ್ಳುವುದು.
- ನಮ್ಮ ಸಮಾಜದಲ್ಲಿ ಒಬ್ಬ ಪರಿಸರ ಪ್ರಜ್ಞೆ ಮತ್ತು ಕಾಳಜಿಯನ್ನು ಹೊಂದಿರುವ ನೆರೆಯವರಂತೆ ಇರುವುದು.
- ಮರು ಬಳಕೆ ಮಾಡಿ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದು.
- ನಮ್ಮ ಸ್ವಂತ ಕೆಲಸದ ಪ್ರಕ್ರಿಯೆಗಳಲ್ಲಿ ಪರಿಸರವನ್ನು ಪ್ರತಿಕೂಲವಾಗಿ ಹಾನಿ ಮಾಡದಂತೆ ನೋಡಿಕೊಳ್ಳುವುದು.
- ನೈಸರ್ಗಿಕ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ನಮ್ಮ ಸಂಸ್ಥೆಯಲ್ಲಿ ಬಳಸುವುದು.
- ನಮ್ಮ ಪರಿಸರವನ್ನು ಉಳಿಸುವ ಮತ್ತು ಅರ್ಥ ಮಾಡಿಕೊಳ್ಳುವ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು.
- ಪರಿಸರವನ್ನು ಉಜ್ಜೀವಿಸುವ ಹೆಜ್ಜೆಗಳನ್ನು ತಿಳಿದು ಪಾಲಿಸುವುದು.
- ಈ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಿ, ನಿರಂತರವಾದ ಆಡಿಟ್, ಮೌಲ್ಯ ಮಾಪನ ಮತ್ತು ಆತ್ಮಾವಲೋಕನವನ್ನು ಪಾಲಿಸುವುದು.
- ಪರಿಸರದ ಕಾಳಜಿಯನ್ನು ಹೊಂದಿರುವ ಒಳ್ಳೆಯ ವಿತರಕರೊಂದಿಗೆ ಕಾರ್ಯ ನಿರ್ವಹಿಸುವುದು.
- ನಮ್ಮ ಉದ್ಯೋಗಿಗಳಿಗೆ, ಗ್ರಾಹಕರಿಗೆ ಮತ್ತು ಸ್ವಯಂ ಸೇವಕರಿಗೆ ಪರಿಸರದ ಕಾಳಜಿಯನ್ನು ಹೊಂದಿಕೊಳ್ಳುವಂತೆ ಜಾಗೃತಿಯನ್ನು ಮೂಡಿಸಿ, ಅದನ್ನು ಪರಿಪಾಲಿಸುವಂತೆ ಆದೇಶಿಸುವುದು.
ಜ಼ಮಾಲ್ ಪ್ರಧಾನ್
ವ್ಯವಸ್ಥಾಪಕ ನಿರ್ದೇಶಕರು
ಮ್ಯಾಗ್ನಮ್ ವಿತರಕರು ಪ್ರೈವೇಟ್ ಲಿಮಿಟೆಡ್ (MDPL)
ಪ್ಲಾಟ್ # 98-6, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ
ವಸಂತನರಸಾಪುರ, ತುಮಕೂರು, ಕರ್ನಾಟಕ-572138
ದಿನಾಂಕ: 22 ಜುಲೈ 2019